ಅಂಚೆಯವನು(ಪೋಸ್ಟ್ ಮ್ಯಾನ್) ಮತ್ತು ಚಿಕ್ಕ ಹುಡುಗಿ

ಮೌಲ್ಯ: ಪ್ರೀತಿ

ಉಪ-ಮೌಲ್ಯ: ಸಹಾನುಭೂತಿ, ಸೂಕ್ಷ್ಮತೆ

ಒಬ್ಬ ಪೋಸ್ಟ್‌ಮ್ಯಾನ್ ಮನೆಯ ಬಾಗಿಲು ಬಡಿದು, “ಪತ್ರ” ಎಂದು ಹೇಳಿದನು.

ಒಳಗಿನಿಂದ ಮಗುವಿನಂತ ಧ್ವನಿ ಕೇಳಿಸಿತು, “ನಾನು ಬರುತ್ತೇನೆ.” ಆದರೆ, ವ್ಯಕ್ತಿ ಬರಲಿಲ್ಲ; ಮೂರೂ ನಾಲ್ಕುನಿಮಿಷಗಳು ಕಳೆದವು.

ಕೋಪಗೊಂಡ ಅಂಚೆಯವನು ಮತ್ತೆ ಕೂಗಿದನು, “ಹೇ, ದಯವಿಟ್ಟು ಬೇಗನೆ ಬಂದು ಪತ್ರವನ್ನು ತೆಗೆದುಕೊಂಡು ಹೋಗು. ” ಮಗುವಿನಂತ ಧ್ವನಿ ಮತ್ತೆ ಹೇಳಿತು, “ಮಿಸ್ಟರ್ ಪೋಸ್ಟ್‌ಮ್ಯಾನ್, ಪತ್ರವನ್ನು ಬಾಗಿಲಿನ ಕೆಳಗೆ ಇರಿಸಿ, ನಾನು ಬರುತ್ತಿದ್ದೇನೆ.”

ಅಂಚೆಯವನು ಹೇಳಿದರನು, “ಇದು ನೋಂದಾಯಿತ ಪತ್ರವಾಗಿರುವುದರಿಂದ, ಸ್ವೀಕೃತಿಯ ಅಗತ್ಯವಿದೆ, ಆದ್ದರಿಂದ ನೀವು ಸಹಿ ಮಾಡಬೇಕಾಗುತ್ತದೆ.”

ಸರಿಸುಮಾರು ಆರರಿಂದ ಏಳು ನಿಮಿಷಗಳ ನಂತರ ಬಾಗಿಲು ತೆರೆದಾಗ, ತಡವಾಗಿ ಸಿಟ್ಟಿಗೆದ್ದ ಅಂಚೆಯವನು ಬಾಗಿಲು ತೆರೆದ ವ್ಯಕ್ತಿಗೆ ತನ್ನ ಮನಸ್ಸಿನ ತುಣುಕನ್ನು ನೀಡಲು ಹೊರಟನು. ಆದರೆ, ಕಂಡದ್ದು ಬೆಚ್ಚಿಬಿದ್ದು ಮೂಕವಿಸ್ಮಿತರಾದನು!

ಕಾಲಿಲ್ಲದ ಪುಟ್ಟ ಹುಡುಗಿಯೊಬ್ಬಳು ಪತ್ರವನ್ನು ತೆಗೆದುಕೊಳ್ಳಲು ಅವನ ಮುಂದೆ ಮಂಡಿಯೂರಿ ಕುಳಿತಳು. ಅಂಚೆಯವನು ಸದ್ದಿಲ್ಲದೆ ಪತ್ರವನ್ನು ತಲುಪಿಸಿದನು ಮತ್ತು ಪಶ್ಚಾತ್ತಾಪಪಟ್ಟು ಹಿಂತಿರುಗಿದನು. ದಿನಗಟ್ಟಲೆ ಹೀಗೆಯೇ ಸಾಗಿತು…

ಅಂಚೆಯವನು ಹುಡುಗಿಯ ಮನೆಗೆ ಪತ್ರವನ್ನು ತಲುಪಿಸಲು ಹೋದಾಗ  ಬಾಗಿಲು ತೆರೆಯುವವರೆಗೆ ಕಾಯುತ್ತಿದ್ದನು.

ದೀಪಾವಳಿ ಸಮೀಪಿಸುತ್ತಿತು, ಮತ್ತು ಅಂಚೆಯವನು ಯಾವಾಗಲೂ ಬರಿಗಾಲಿನಲ್ಲಿ ಇರುವುದನ್ನು ಹುಡುಗಿ ಗಮನಿಸಿದಳು. ಆದ್ದರಿಂದ, ಒಮ್ಮೆ ಅಂಚೆಯವನು ಅಂಚೆಯನ್ನು ತಲುಪಿಸಲು ಬಂದಾಗ, ಹುಡುಗಿ ಸದ್ದಿಲ್ಲದೆ ನೆಲದ ಮೇಲಿನ ಹೆಜ್ಜೆಗುರುತುಗಳಿಂದ ಅಂಚೆಯವನ ಪಾದದ ಅಳತೆಯನ್ನು ತೆಗೆದುಕೊಂಡಳು.

ದೀಪಾವಳಿಯ ಮುಂಚೆ, ಅಂಚೆಯವನು ಪತ್ರವನ್ನು ತಲುಪಿಸಲು ಬಂದಾಗ, ಹುಡುಗಿ ಅವನಿಗೆ, “ಅಂಕಲ್, ಇದು ದೀಪಾವಳಿಯಂದು ನಾನು ನಿಮಗೆ ಉಡುಗೊರೆ ಕೊಡುತ್ತಿದೇನೆ” ಎಂದು ಹೇಳಿದಳು.
ಅವನು ಬೂಟುಗಳನ್ನು ನೋಡಿದಾಗ ಅವನ ಕಣ್ಣುಗಳಲ್ಲಿ ಕಣ್ಣೀರು ತುಂಬಿದವು, ಏಕೆಂದರೆ ಅವನ ಸಂಪೂರ್ಣ ಸೇವೆಯ ಸಮಯದಲ್ಲಿ ಅವರು ಬರಿಗಾಲಿನಲ್ಲಿದ್ದುದನ್ನು ಯಾರೂ ಗಮನಿಸಲಿಲ್ಲ.
ಕಲಿಕೆ:
ಇತರರ ನೋವನ್ನು ಗ್ರಹಿಸುವ, ಅನುಭವಿಸುವ ಮತ್ತು ಅವರ ನೋವನ್ನು ಹಂಚಿಕೊಳ್ಳುವ ಸಂವೇದನಾಶೀಲತೆ ಮಾನವನ ಗುಣವಾಗಿದೆ, ಅದು ಇಲ್ಲದೆ ಮನುಷ್ಯ ಸಂಪೂರ್ಣ ಗುಣ ಹೊಂದಿರುವನಾಗಿ ಇರಲು ಸಾಧ್ಯವಿಲ್ಲ.
ದುಃಖದ ಸಮಯದಲ್ಲಿ ಇತರರ ನೋವನ್ನು ಕಡಿಮೆ ಮಾಡಲು ನಾವು ಕೊಡುಗೆ ನೀಡುವಂತೆ ನಮಗೆ ಸೂಕ್ಷ್ಮತೆಯ ರೂಪದಲ್ಲಿ ಆಭರಣವನ್ನು ನೀಡುವಂತೆ ನಾವು ದೇವರನ್ನು ಪ್ರಾರ್ಥಿಸಬೇಕು.

Leave a comment