ಎರಡು ಸಮುದ್ರಗಳು

 

sea1

 

ಮೌಲ್ಯ : ಒಳ್ಳೆಯ ನಡವಳಿಕೆ

ಉಪಮೌಲ್ಯ : ಹಂಚಿಕೆ ಮತ್ತು ಆರೈಕೆ

ಎರಡು ಸಮುದ್ರಗಳ ಬಗ್ಗೆ ಒಂದು ಸುಂದರ ಕಥೆ ಇದೆ. ಮೆಡಿಟರೇನಿಯನ್ ಜಲಾನಯನದ ಪ್ರದೇಶದಲ್ಲಿ ಮೃತ ಸಮುದ್ರ(ಡೆಡ್ ಸೀ) ಎಂಬ ಪ್ರಸಿದ್ಧ ಸಮುದ್ರ ಇದೆ. ಪ್ರತಿ ಶಾಲೆಯ ಮಗುವಿಗೆ ತಿಳಿದಿರುವ ವಿಷಯವೇನೆಂದರೆ ವಾಸ್ತವದಲ್ಲಿ ಅದು ಸಮುದ್ರವಲ್ಲ ಆದರೆ ವಿಪರ್ಯಾಸವಾಗಿ ಕರೆಯಲ್ಪಡುವ ಏಕೈಕ ಸಮುದ್ರವೆಂದರೆ ಡೆಡ್ ಸೀ; ಇದು ವಾಸ್ತವವಾಗಿ ಒಂದು ಸರೋವರ. ಆದರೆ ಅದನ್ನು ಏಕೆ ಡೆಡ್ ಸೀ ಎಂದು ಕರೆಯುವರು? ಅದು 67 ಕೀ.ಮಿ 18 ಕೀ.ಮಿ ಅಗಲ 1237 ಅಡಿ ಆಳ ಇದ್ದರು ಅದರಲ್ಲಿ ಒಂದು ಜೀವವು ಇಲ್ಲ. ಇದು ಭೂಮಿಯಲ್ಲಿ ಇರುವ ಅಧಿಕ ಉಪ್ಪುನೀರಿನ ಸಮುದ್ರವೆಂದರೆ ಇದೇ. ಸಾಧಾರಣ ಸಮುದ್ರದ ನೀರಿಗಿಂತ ಸುಮಾರು ಒಂಬತ್ತು ಬಾರಿ ಉಪ್ಪಾಗಿರುತ್ತದೆ.ಹೆಚ್ಚು ಉಪ್ಪಿನ ಸಾಂದ್ರತೆಯ ಕಾರಣ ಈ ಸಮುದ್ರದಲ್ಲಿ ಸಸ್ಯ ಅಥವ ಪ್ರಾಣಿಗಳ ಸುಳಿವು ಇಲ್ಲ. ಈ ಕೆರೆ ಇಷ್ಟು ಉಪ್ಪಾಗಿರಲು ಏನು ಕಾರಣ? ತುಂಬ ಸರಳ. ಅದು ಎಂದಿಗೂ ಹರಿಯುವುದಿಲ್ಲ. ಅದು ಜೋರ್ಡನ್ ನದಿಯಿಂದ ನೀರು ಪಡೆಯುತ್ತದೆ ಆದರೆ ಎಂದಿಗೂ ಹರಿಯುವುದಿಲ್ಲ.ಇದು ಸಮುದ್ರದ ಮಟ್ಟಕಿಂತ ಕೆಳಗಿರುತ್ತದೆ ಮತ್ತು ಹರಿಯಲು ಹೊರದಾರಿ ಇರಲಿಲ್ಲ. ಸ್ವಲ್ಪ ಪ್ರಮಾಣದ ನೀರು ಅವಿಯಾಗಿ ಉಪ್ಪು ಮಾತ್ರ ಉಳಿಯುತ್ತದೆ,             ಪ್ರಕ್ರಿಯೆಯಲ್ಲಿ ಹೆಚ್ಚು ವಾಸಿಸಲು ಯೋಗ್ಯವಿಲ್ಲದ ಪರಿಸರವನ್ನು ಸೃಷ್ಟಿಸುತ್ತದೆ.

ಡೆಡ್ ಸೀಯ ಉತ್ತರಕ್ಕೆ ಗಲಿಲೀ ಸೀ ಇದೆ. ಅದು 13 ಮೈಲ್ಸ್ x 8 ಮೈಲ್ಸ್ ಅಷ್ಟೆ ಇದೆ; ಇದನ್ನು ಡೆಡ್ ಸೀಗೆ ಹೋಲಿಸಿದರೆ ಸಾಕಾಷ್ಟು ಚಿಕ್ಕದಾಗಿದೆ, ಆದರೆ ಅದರ ಅಮುಲ್ಯತೆ ಎನೆಂದರೆ ಇದರಲ್ಲಿ ವಿಲಕ್ಷಣ ಸಸ್ಯಗಳು ಮತ್ತು ಪ್ರಾಣಿಗಳು ಅಡಗಿ ಸಮೃದ್ಧವಾಗಿದೆ. ಅದರಲ್ಲಿ 20 ರೀತಿಯ ಮೀನುಗಳು ಇದೆ ಎಂದು ಹೇಳುತ್ತಾರೆ. ಈ ಪ್ರದೇಶದ ಪ್ರಗತಿಪರ ಮೀನುಗಾರಿಕೆಯಿಂದ ಮತ್ತು ಅದರ ನೀರಿನಿಂದ ಸುತ್ತಮುತ್ತಲು ಇರುವ ಬೆಳಗಲು ಉತ್ತಮ ಫಸಲನ್ನು ಕೊಟ್ಟು ಈ ಸಮುದ್ರವು ನೂರಾರು ವರ್ಷಗಳಿಂದ ಅನೇಕ ಜೀವಗಳನ್ನು ಬೆಂಬಲಿಸುತ್ತದೆ. ಈಗ ಸಮುದ್ರವನ್ನು ಡೆಡ್ ಸೀಗೆ ಹೋಲಿಸಿದರೆ ಪುಟ್ಟದಾಗಿದ್ದರು, ಏಕೆ ಅಷ್ಟು ಜೀವಂತವಾಗಿದೆ? ಸರಳವಾದ ರಹಸ್ಯವೇನೆಂದರೆ, ಈ ಸಮುದ್ರವು ಅದರ ನೀರನ್ನು ಹಂಚಿಕೊಳ್ಳುತ್ತದೆ. ಅದೇ ನದಿ ಜೋರ್ಡನ್ ಈ ಸಮುದ್ರಕ್ಕೆ ಹರಿಯುತ್ತದೆ ಆದರೆ ಗಲಿಲೀ ಸಮುದ್ರವು ಅದರ ನೀರನ್ನು ಹರಿಯುವಂತೆ ಮಾಡುತ್ತದೆ.ಮತ್ತು ನಿಖರವಾಗಿ ಅದು ಆರೋಗ್ಯಕರವಾಗಿ, ರೋಮಾಂಚಕವಾಗಿ ಮತ್ತು ಜೀವತವಾಗಿದೆ.

ಕಲಿಕೆ:

ನಾವು ಹಂಚಿಕೊಂಡಾಗ, ನಾವು ಶ್ರಿಮಂತರಾಗುತ್ತೇವೆ! ಈ ಗಣಿತವನ್ನು ಅರ್ಥ ಮಾಡಿಕೊಂಡ ಅನೇಕರು ತಮ್ಮ ಜೀವನವನ್ನು ಅಧ್ಬುತವಾಗಿ ಪುಷ್ಟಿಕರಿಸಿದ್ದಾರೆ. ನಮಗೆ ಅದೃಷ್ಟವಿದ್ದು ಸಂಪತ್ತು, ಜ್ಞಾನ, ಪ್ರೀತಿ, ಗೌರವ ಎಂಬ ವಿಷಯಗಳನ್ನು ದೇವರ ಆಶಿರ್ವಾದದಿಂದ ನಾವು ಪಡೆದಿದ್ದರೆ, ಮತ್ತು ನಾವು ಅದನ್ನು ಹಂಚಿಕೊಳ್ಳಲು ಕಲಿಯಲಿಲ್ಲವೆಂದರೆ: ನಾವು ಪಡೆದಿರುವಂತ ಎಲ್ಲಾ ವಿಷಯಗಳು ಇತರರ ಜೊತೆ ಹಂಚಿಕೊಳದಿದ್ದರೆ ನೀರು ಆವಿಯಾಗಿ ಹೋಗುವಂತೆ ನಾವು ಪಡೆದಿರುವಂತ ವಿಷಯಗಳು ಕೂಡ ನಮ್ಮನ್ನು ಬಿಟ್ಟು ಹೋಗುತ್ತವೆ. ದೇವರು ನಮಗೆ ಕೊಟ್ಟಿರುವಂತ ಒಳ್ಳೆಯ ವಿಷಯಗಳನ್ನು ಇತರರ ಜೊತೆ ಹಂಚಿಕೊಳದಿದ್ದರೆ ಅವು ಸ್ಥಿಗಿತವಾಗುತ್ತದೆ. ಹೆಚ್ಚಿನ ಅನುಗ್ರಹವನ್ನು ಪಡೆಯಬೇಕ್ಕೆಂದರೆ ನಾವು ಹಂಚಿಕೊಳ್ಳುವುದನ್ನು ಕಲಿಯಬೇಕು. ಕಪ್ ಖಾಲಿಯಾಗಲು ಪ್ರಾರಂಭಿಸಿದಾಗ ಮಾತ್ರ ನಾವು ಪುನಃ ಅದರಲ್ಲಿ ನೀರನ್ನು ತುಂಬಬಹುದು.ಎಲ್ಲರಿಗೂ ಕೊಡುವ ಕಲೆಯನ್ನು ಕಲಿಯೋಣ.

 

Leave a comment