ಒಂದು ಸ್ಪರ್ಧೆದಾರನ ರೂಪಾಂತರ

 

ಮೌಲ್ಯ : ಅಹಿಂಸೆ

ಉಪಮೌಲ್ಯ : ಕ್ಷಮೆ, ತಾಳ್ಮೆ , ಪ್ರೇಮ

ಸಂತ ಏಕನಾಥ್(ಪ್ರಖ್ಯಾತ ಸಂತ ಮಹಾರಾಷ್ಟ್ರ, ಭಾರತ) ಅವರ ಆಶ್ರಮದ ಬಳಿ ಒಂದು ಗುಂಪು ಜನರು ಕಾರ್ಡ್ಸ್ ಅಡುತ್ತಿದರು.ಇದು ಕೆಲಸವಿಲ್ಲದ ನಿರುಧ್ಯೋಗಿಗಳ ಅಭ್ಯಾಯಸವಾಗಿತು.

ಒಂದು ನಿರ್ದಿಷ್ಟ ದಿನದಂದು ಒಂದು ಆಟಗಾರನು ನಿರಂತರವಾಗಿ ಹಣ್ಣವನ್ನು ಕಳೆದುಕೊಳುತ್ತಿದನು, ಕಾರಣ ಕಾರ್ಡುಗಳು ಅಂದು ಅವನಿಗೆ ಅನುಕುಲಕರವಾಗಿರಲ್ಲಿಲ್ಲ. ಅವನ ದುರಾಧೃಷ್ಟದ ಬಗ್ಗೆ ಅವನು ಪ್ರಕ್ಷುಬ್ಧನಾಗಿದ್ದನು, ಅದಲ್ಲದೆ ಅವನಿಗಿಂತ ಉತ್ತಮವಾದ ಸ್ಥಿತಿಯಲ್ಲಿ ಇರುವ ಇತರರನ್ನು ಕಂಡು ಅಸೂಯೆ ಹೊಂದಿದನು. ನೈಸರ್ಗಿಕವಾಗಿ ಕಳೆದುಕೊಂಡವನಾಗಿ ಕೋಪದಿಂದ ಇದ್ದನು. ಚರ್ಚೆ ಮಾಡಲು ಪ್ರಾರಂಭಿಸಿದನು, ಅದು ಕದನವನ್ನು ಉಂಟು ಮಾಡಿತು.

ಅಲ್ಲಿದ ಒಬ್ಬರು ಅವನನ್ನು ಕೋಪಗೊಳಬೇಡ ಎಂದು ಸಲಹೆ ನೀಡಿದರು.

ಅವನು ಕೋಪದಿಂದ, “ನನ್ನ ಬಗ್ಗೆ ಎನು ಯೋಚಿಸಿರುವಿರಿ? ನಾನು ಕೋಪಗೊಳ್ಳದೆ ಇರಲು ನಾನು ಸಂತ ಏಕನಾಥ್ ಅಲ್ಲ”.

ಇನ್ನೊಬ್ಬನು, “ ಸಂತ ಏಕನಾಥ್ ದೈವಿಕ ವ್ಯಕ್ತಿಯೆ, ಕೋಪಗೊಳ್ಳದೆ ಇರಲು, ಅವರು ಕೂಡ ಸಾಮಾನ್ಯ ಮನುಷ್ಯನ ಅಲ್ಲವೆ, ಕೋಪಗೊಳ್ಳದೆ ಇರುವ ಒಬ್ಬ ವ್ಯಕ್ತಿಯನ್ನು ತೋರಿಸು” ಎಂದನು.

ಮತ್ತೊಬ್ಬನು “ ಬಹುಶಃ ಏಕನಾಥ್ ಅವರಿಗೆ ಯಾವ ಭಾವನೆ ಅಥವ ಸ್ವಯಂ ಗೌರವ ಇಲ್ಲವೇನೊ”, ಸ್ವಯಂ ಗೌರವವುಳ್ಳ ವ್ಯಕ್ತಿಗೆ ಖಂಡಿತವಾಗಿ ಕೋಪ ಬರುತ್ತದೆ ಮತ್ತು ಅವನಿಂದ ಯಾವಾಗಲು ಅವನನ್ನು ಗುರಿಯಿಟ್ಟು ಮಾತುಗಳನ್ನು ಆಡಿದರೆ ಶಾಂತವಾಗಿ ಉಳಿಯಲು ಸಾಧ್ಯವಿಲ್ಲ” ಎಂದನು.

ಇನ್ನೊಬ್ಬ ಆಟಗಾರನು, “ ಇಲ್ಲ ಸಂತ ಏಕನಾಥ್ ಅವರಿಗೆ ಕೊಪ ಬರುವುದಿಲ್ಲ” ಎಂದನು.

“ಇಲ್ಲ ಇದು ನಿಜವಲ್ಲ, ಕೋಪ ಬರದ ಮನುಷ್ಯನೆ ಇಲ್ಲ”.

“ಖಂಡಿತವಾಗಿ ಇಲ್ಲ, ನನಗೆ ಏಕನಾಥ್ ಬಗ್ಗೆ ಗೊತು,ಅವರನ್ನು ನೋಡಿರುವೇನು ಅವರಿಗೆ ಕೋಪ ಬರುವುದಿಲ್ಲ”.

ಅದು ಒಂದು ಜೂಜಿನ ಗುಂಪು,ನೀವು ಅವರಿಂದ ಎನು ನಿರೀಕ್ಷಿಸಬಹುದು? ಅವರ ಹಾಸ್ಯಾಸ್ಪದ ಸಂವಾದ ಮುಂದುವರೆಯಿತು.

“ಸರಿ ಎನು ಪಂದ್ಯ ಕಟ್ಟಲು ಬಯಸುವಿರಿ? ನಾನು ಏಕನಾಥ್ ಅವರಿಗೆ ಕೋಪ ಬರುವಂತೆ ಮಾಡುತ್ತೇನೆ “.

“ ನೀವು ತಲೆ ಕೆಳಗಾಗಿ ನಿಂತರು ಅದು ಸಾಧ್ಯವಿಲ್ಲ”

“ಸರಿ, ಒಬ್ಬರು 100 ರುಪಾಯಿ ಪಂಧ್ಯ ಕಟ್ಟಿರಿ, ಏಕನಾಥ್ ಅವರನ್ನು ಕೋಪ ಬರುವಂತೆ ಮಾಡಿ ನಾನು ಈ ಪಂಧ್ಯದಲ್ಲಿ ಸೋತ ಎಲ್ಲಾ ಹಣವನ್ನು ಮತ್ತೆ ಗಳಿಸುವೇನು”.

ಎಲ್ಲರು ಒಪ್ಪಿಕೊಂಡರು, ಮಾರನೆಯ ದಿವಸ ಅವರು ಯೋಚಿಸಿದಂತೆ ಸವಾಲು ಮಾಡಿದ ವ್ಯಕ್ತಿ ಏಕನಾಥ್ ಅವರ ಮನೆಯ ಮುಂದೆ ಬಂದು ನಿಂತನು. ಇನ್ನು ಇತರರು ದೂರದಲ್ಲಿ ನಿಂತುಕೊಂಡು ನೋಡುತ್ತಿದರು.

ಆ ದಿನ ಬೆಳಿಗ್ಗೆ ಸೂರ್ಯನು ಪೂರ್ವ ದಿಕ್ಕಿನಲ್ಲಿ ಉದಯವಾಗುತ್ತಿದನು, ಏಕನಾಥ್ ಎಂದಿನಂತೆ ವಿಠಲನ ಭಜನೆಯನ್ನು ಹಾಡುತ್ತ ಹೊರಗೆ ಬಂದರು. ಅವರು ತಮ್ಮ ಸ್ನಾನಕ್ಕಾಗಿ ಗೋದಾವರಿ ನದಿಗೆ ತೆರಳಿದರು.ಅವರು ಸ್ನಾನವನ್ನು ಮುಗಿಸಿ ತಮ್ಮ ಪ್ರಾರ್ಥನೆಯನ್ನು ನಿರ್ವಹಿಸಿ ಮತ್ತೆ ಮನೆಗೆ ಹಿಂದಿರುಗುತ್ತಿದರು.

ಏಕನಾಥ್ ಅವರನ್ನು ಕೋಪ ಬರುವಂತೆ ಮಾಡುವೆನು ಎಂದು ಹೇಳಿದ ಆ ಸವಾಲುದಾರನು ಅವನ ಬಾಯಿಯ ತುಂಬ ಎಲೆ ಅಡಿಕೆಯನ್ನು ಇಟ್ಟುಕೊಂಡು, ಏಕನಾಥ್ ಆ ಕಡೆ ಬರುವರೆಂದು ಕಾಯುತ್ತಿದನು. ಏಕನಾಥ್ ಮನೆಯೊಳಗೆ ಪ್ರವೇಶ ಮಾಡಲಿದ್ದಾಗ ಆ ವ್ಯಕ್ತಿಯು ಅವನ ಬಾಯಲ್ಲಿದ ಎಲೆ ಅಡಿಕೆಯ ಎಂಜಲನ್ನು ಏಕನಾಥ್ ಅವರ ಮುಖದ ಮೇಲೆ ಉಗುಳಿದನು.ಒಂದು ಕ್ಷಣ ಏಕನಾಥ್ ಅವರಿಗೆ ಆಘಾತ ಉಂಟಾಯಿತು, ಆ ವ್ಯಕ್ತಿಯನ್ನು ನೋಡಿದರು, ಆದರೆ ಒಂದು ಮಾತು ಕೂಡ ನುಡಿಯದೆ, ಗೋದಾವರಿಗೆ ಸ್ನಾನ ಮಾಡಲು ಹೋಗಿ ಸ್ನಾನ ಮಾಡಿ ಹಿಂದಿರುಗಿದರು.

ಆ ವ್ಯಕ್ತಿಯು ಮೂದಲು ಮಾಡಿದ್ದನೆ ಪುನರಾವರ್ತಿಸಿದರು. ಏಕನಾಥ್ ಅವರು “ಜೈ ಪಾಂಡುರಂಗ, ಜೈ ವಿಠಲ” ಎಂದು ಉಚ್ಚರಿಸಿ, ಎನು ಗೊಣಗದೆ ಸ್ನಾನ ಮಾಡಲು ಮತ್ತೆ ಹೊರಡಲಾದರು.

ಎಲ್ಲರ ಆಶ್ಚರ್ಯಕ್ಕೆ ಇದೆ ರೀತಿ ಮೂರು ನಾಲ್ಕು ಬಾರಿ ಸಂಭವಿಸಿತು, ಒಂದು ಮಾತು ಗೊಣಗದೆ, ಮುಖದಲ್ಲಿ ಯಾವ ವಕ್ರ ಭಾವನೆ ಕೂಡ ತೋರಿಸದೆ ಏಕನಾಥ್ ವಿಠಲನ ನಾಮವನ್ನು ಉಚ್ಚರಿಸಿತಾ ಮತ್ತೆ ಮತ್ತೆ ಸ್ನಾನ ಮಾಡಲು ಗೊದವರಿಗೆ ಹೋದರು.ಅವರು ಯಾವುದೆ ರೀತಿಯಾದ ಅಸಮಾಧಾನ, ಕೋಪ ಅಥವಾ ಅತೃಪ್ತಿಯನ್ನು ವ್ಯಕ್ತ ಪಡಿಸದೆ ಸಾಮಾನ್ಯವಗಿದ್ದರು.

ಆ ವ್ಯಕ್ತಿಯ ಜೊತೆ ಜೂಜು ಅಡುತ್ತಿದ ಇತರ ವ್ಯಕ್ತಿಗಳು ಇದನ್ನು ಗಮನಿಸಿ, ಆ ವ್ಯಕ್ತಿಯನ್ನು ಅಲ್ಲಿಂದ ಓಡಿಸಿದರು.ಅಲ್ಲಿದ್ದ ಎಲ್ಲರು, ಅಂತ ಹೊಲಸು ಕಾರ್ಯವನ್ನು ಮಾಡಿದ ಆ ವ್ಯಕ್ತಿಯು ಸೇರಿ ಏಕನಾಥ್ ಅವರ ಪಾದಗಳ ಮೇಲೆ ಬಿದ್ದು ಕ್ಷಮೆ ಕೇಳಿದರು. ಏಕನಾಥ್ ಒಬ್ಬಬರನ್ನು ತಬ್ಬಿ ಕೊಂಡರು. ಅವರ ಮೇಲೆ ಎಂಜಲನ್ನು ಉಗುಳಿದ ಆ ಅಪರಾದಿ ವ್ಯಕ್ತಿ ಜೋರಾಗಿ ಅಳತೊಡಗಿದನು, “ಸ್ವಾಮೀಜಿ, ನಾನು ಇಂತ ಮೂರ್ಖ ತಪ್ಪನ್ನು ಮಾಡಿದ ಒಂದು ಪಾಪಿ, ನನನ್ನು ಕ್ಷಮಿಸಿ ಎಂದು ಅವರ ಪದಗಳನ್ನು ಹಿಡಿದುಕೊಂಡು, “ನನನ್ನು ಕ್ಷಮಿಸಿ, ನನನ್ನು ಕ್ಷಮಿಸಿ “ಎಂದು ಪದೆ ಪದೆ ಬೇಡಿಕೊಂಡನು.

ಆ ವ್ಯಕ್ತಿಯು ತಾನು ಮಾಡಿದ ಕೆಲಸಕ್ಕೆ ಪಶ್ಚತಾಪ ಪಟ್ಟನು, ಏಕನಾಥ್ ಅವರು ಅವನನ್ನು ಪ್ರೀತಿಯಿಂದ ತಬ್ಬಿಕೊಂಡರು.

ಏಕನಾಥ್ ಅವರು ಇತರರರಂತೆ ಇರಲಿಲ್ಲ,ಅಳುತಿದ್ದ ಆ ಪಾಪಿಯನ್ನು “ಏಕೆ ಅಳುತಿರುವೆ, ನೀನು ಯಾವ ಪಾಪದ ಕಾರ್ಯವನ್ನು ಮಾಡಿಲ್ಲ,ವಾಸ್ತವವಾಗಿ ನೀವು ಆಶಿರ್ವಾದ ಪಡೆದಿರುವ ಆತ್ಮ ನಿಮ್ಮನ್ನು ನಾನು ಪೂಜಿಸಬೇಕು, ನೀನು ನನಗೆ ಒಂದು ಅಪೂರ್ವವಾದ ಅವಕಾಶವನ್ನು ಸೃಷ್ಟಿಸಿದಿಯಾ, ಇಂದು ಮಂಗಳಕರವಾದ ಏಕಾದಶಿ ದಿವಸ ನಿನ್ನಿಂದ ನಾನು ತಾಯಿ ಗೋದಾವರಿಯಲ್ಲಿ ನಾಲ್ಕು ಬಾರಿ ಪವಿತ್ರ ಸ್ನಾನ ಮಾಡಿ ವಿಠಲನ ದರ್ಶನವನ್ನು ಮಾಡಿದೆನು.ಆದುದರಿಂದ ನಿನಗೆ ನನ್ನ ಧನ್ಯವಾದಗಳು ಎಂದು ಹೇಳಿ ಏಕನಾಥ್ ಅವರು ಆ ವ್ಯಕ್ತಿಗೆ ವಂದನೆಗಳನ್ನು ವ್ಯಕ್ತ ಪಡಿಸಿದರು.

ಈ ಘಟನೆಯ ನಂತರ ಜೂಜು ಆಡಲು ಅವರು ಭೇಟಿ ಮಾಡುತ್ತಿದ ಸ್ಥಳವನ್ನು  ಬಿಟ್ಟು, ಆ ಗುಂಪಿಗೆ ಸೇರಿದ ಎಲ್ಲಾ ವ್ಯಕ್ತಿಗಳು ನಿತ್ಯವು ದೀಪವನ್ನು ಬೆಳಗಿಸಿ, ಸಂತ ಏಕನಾಥ್ ಅವರಿಂದ ಕಲಿತ ನಾಮ ಸಂಕೀರ್ತನವನ್ನು ಮಾಡಿ, ಏಕನಾಥ್ ಅವರ ಶಿಷ್ಯರಾದರು.

ಕಲಿಕೆ:

ಕ್ಷಮೆ ಎಂಬುದು ದೈವಿಕ ಗುಣ. ನಾವು ಪವಿತ್ರವಾದ ಈ ಗುಣಮಟ್ಟವನ್ನು ನಮ್ಮಲ್ಲಿ ಅಭಿವೃದಿ ಪಡಿಸಿದರೆ, ಹಾಗು ನಮ್ಮೊಳಗೆ ಶಾಂತಿ ಮತ್ತು ಪ್ರೀತಿಯನ್ನು ಬೆಳಸುವ ಮೂಲಕ ನಾವು ನಮ್ಮನ್ನು ರುಪಾಂತರಗೊಳಿಸಬಹುದು,ಅದಲ್ಲದೆ ಇತರರನ್ನು ರೂಪಾಂತರಗೊಳಿಸಲು ಸಹಾಯ ಮಾಡುವ ಸಾಧನವಾಗಿ ಇರಬಹುದು.

 

 

 

 

Leave a comment